Sunday, January 1, 2017

ಸ್ಥಳ ಪುರಾಣ,

                                 ಕುಬ್ಜಾ ನದಿ  
ಭಾಗ 2 :
  ಪಾರ್ವತಿಯು ಶಾಪಕ್ಕೆ ನೀಡಿದ ವಿಮೋಚನಾ ದಾರಿಯೂ  ‘ಪಿಂಗಲೆಯೇ  ನಿನ್ನ ತಪಸ್ಸಿಗೆ ಮೆಚ್ಚಿರುತ್ತೇನೆ.ನೀನು ಈಗ ಮಧುರೆಗೆ ಹೋಗು. ಅಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕಂಸನ  ವಧೆಗಾಗಿ ಬರುತ್ತಾನೆ. ನೀನು ಮಧುರೆಯಲ್ಲಿ ಮಾನೆ ಮಾಡಿಕೊಂಡು  ಕೃಷ್ಣನ ದರ್ಶನಕ್ಕೆ ಕಾದಿರು. ಶ್ರೀ ಕೃಷ್ಣನ ದರ್ಶನ, ಆಲಿಂಗನದಿಂದ  ನಿನ್ನ ಕುಬ್ಜತ್ವವು ನಿವಾರಣೆಯಾಗಿ ಮೊದಲಿನ ರೂಪವನ್ನು ಹೊಂದಿ ಕೈಲಾಸವನ್ನು ಸೇರುತ್ತಿ. ನೀನು ತಪಸ್ಸು ಮಾಡಿದ ಈ ಪ್ರದೇಶದ ಸಹ್ಯ ಪರ್ವತದಲ್ಲಿ ಹುಟ್ಟಿ ಪಶ್ಚಿಮಾಂಬುಧಿಯನ್ನು  ಸೇರುವ ಈ ನದಿಯು ‘ಕುಬ್ಜ ನದಿ’ಯಾಗಲಿ. ಆ ಚಂದ್ರಾರ್ಕವಾಗಿ ನಿನ್ನ ಹೆಸರು ಬೆಳಗಲಿ. ನಿನ್ನ ಕೋರಿಕೆಯಂತೆ ವರ್ಷಕೊಮ್ಮೆ ನೀನಾಗಿಯೇ ಉಕ್ಕಿ ಬಂದು ನನ್ನನ್ನು ಸ್ನಾನ ಮಾಡಿಸುವ ಪುಣ್ಯ ಅವಕಾಶವನ್ನು ನಿನಗೆ ಕರುಣಿಸಿದ್ದೇನೆ. ಯಾರು ಈ ನದಿಯಲ್ಲಿ ಸ್ನಾನಮಾಡಿ ನನ್ನನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಸಕಲವಿದವಾದ ಸಂಪತ್ತು ದೊರೆಯುತ್ತದೆ.ಶರತ್ಕಾಲದಲ್ಲಿ ವಿಶೇಷವಾದ ಹೋಮ ಹವನಗಳು ಸುವಾಸಿನೀ ಬ್ರಾಹ್ಮಣ ಸಂತರ್ಪಣೆ ಭಕ್ಷ್ಯಬ್ಹೊಜ್ಯಾದಿ  ನೈವಿದ್ಯಗಳಿಂದ  ಭಕ್ತಿಪೂರ್ವಕವಾಗಿ ಯಾರು ನನ್ನನ್ನು ಪೂಜಿಸುತ್ತಾರೋ ಅವರಿಗೆ ಸಂಪೂರ್ಣ ಅನುಗ್ರಹವನ್ನು ನೀಯುತ್ತೇನೆ. ನೀನು ಮಧುರೆಗೆ ಹೋಗು’ ಎಂಬುದಾಗಿ ಪಾರ್ವತಿಯು ವಚನವೀಯುತ್ತಾಳೆ.
       ದೇವಿಯಿಂದ ವರಪಡೆದ ಕುಬ್ಜೆಯು ಮಧುರೆಗೆ ಬಂದು ತನಗಾಗಿ ಒಂದು ಮನೆಯನ್ನು ಕಟ್ಟಿಕೊಂಡು ಶ್ರೀ ದೇವಿಯನ್ನು  ಧ್ಯಾನಿಸುತ್ತಾ ಕೃಷ್ಣನ ಆಗಮನಕ್ಕಾಗಿ ಕಾಯುತ್ತಿದ್ದಳು. ಕಂಸನಿಗೆ ಸುಗಂಧ ದ್ರವ್ಯಗಳನ್ನು ಸಾಗಿಸುವ ಕೆಲಸದಲ್ಲಿ ನಿರತಳಾಗಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಕಾತರಲಾಗಿರುತ್ತಾಳೆ. ಕಂಸನ ವಧೆಗಾಗಿ ಶ್ರೀ ಕೃಷ್ಣ ಬಲರಾಮರು ಬರುವಾಗ ದಾರಿಯಲ್ಲಿ ಕುಬ್ಜೆ  ಸಿಗುತ್ತಾಳೆ. ಶ್ರೀಕೃಷ್ಣ ದರ್ಶನಾದಿಂದ ಆನಂದ ಭರಿತಳಾಗಿ ತನ್ನ ಮನೆಗೆ ಆಹ್ವಾನಿಸಿ  ನಡೆದ ವೃತ್ತಾಂತವನ್ನೆಲ್ಲ ವಿವರಿಸುತ್ತಾಳೆ. ಶ್ರೀ ಕೃಷ್ಣನ ಆಲಿಂಗನದಿಂದ ಅವಳ ಶಾಪ ವಿಮೂಚನೆಯಾಗಿ ಕುಬ್ಜತ್ವ ನಿವಾರಣೆಯಾಗುತ್ತದೆ.ಅತ್ಯಂತ ಸುಂದರಿಯಾಗಿ ಮೊದಲಿನ ರೂಪವನ್ನು ಪಡೆಯುತ್ತಾಳೆ. ಶ್ರೀ ಕೃಷ್ಣಪರಮಾತ್ಮನಿಗೆ
ಸಾಷ್ಟಾಂಗ ನಮಸ್ಕರಿಸಿ ಪುನಃ ರೈಕ್ವಾಶ್ರಮಕ್ಕೆ ಬಂದು ಶ್ರೀ ಬ್ರಾಹ್ಮೀ ದುರ್ಗಾಂಬೆಯನ್ನು  ಸ್ತುತಿಸಿ ಕೈಲಾಸಕ್ಕೆ ಹೋಗುತ್ತಾಳೆ.

           ಹೀಗೆ ಕುಬ್ಜಾ ನದಿಯು ಪಂಚನದಿಗಳಲ್ಲಿ ಒಂದಾಗಿ  ಪಂಚಾಗಂಗಾವಳಿ(ಕುಬ್ಜಾ, ಕೇಟಕೀ,ವಾರಾಹಿ, ಸೌಪರ್ಣಿಕಾ, ಚಕ್ರಾ)ಯಲ್ಲಿ ಪಶ್ಚಿಮಾಂಬುಧಿಯನ್ನು ಸೇರುತ್ತದೆ. ಪ್ರತೀ ವರ್ಷವೊಮ್ಮೆಯಾದರೂ ಕುಬ್ಜಾ ನದಿಯೂ ಉಕ್ಕಿ ಹೆಬ್ಬಾಗಿಲಿನಿಂದ ಒಳ ಪ್ರವೇಶಿಸಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿಯನ್ನು ಅಭ್ಯಂಜನ ಮಾಡಿಸುವ ಪರಿಪಾಟವಿದೆ. ಈ ನದಿಯೂ ಎಲ್ಲಿಯೂ ನೇರವಾಗಿ ಹರಿಯದೆ ಅಂಕುಡೊಂಕಾಗಿ ಹರಿಯುತ್ತಿರುತ್ತದೆ.ಇಲ್ಲಿ “ಕುಬ್ಜಾ”  ಎಂಬ ಹೆಸರು ಅನ್ವರ್ಥಕವಾಗಿದೆ. 

Sunday, August 16, 2015

ಸೇವಾವಿವರ:

           ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಕ್ಷೇತ್ರ ದ  ಸನ್ನಿಧಿಯಲ್ಲಿ ಜರಗುವ ಸೇವೆ ಮತ್ತು                          ಸೇವಾಶುಲ್ಕಗಳ ವಿವರ...
ಸಂ/ಕ್ಕೆ
ಸೇವಾವಿವರ
ಸೇವಾ ಶುಲ್ಕ
1.        
ಚಂಡಿಕಾ ಶಾಂತಿ (ಊಟ 25 ಜನರಿಗೆ ಮಾತ್ರ)
10000 ರೂಪಾಯಿ
2.        
ಶತರುದ್ರಾಭಿಷೇಕ
6000 ರೂಪಾಯಿ
3.        
ರಂಗಪೂಜೆ,ರಾಶಿಪೂಜೆ, ಬೆಳ್ಳಿರಥ
6000 ರೂಪಾಯಿ
4.        
ದುರ್ಗಶಾಂತಿ ಸೇವೆ
4000 ರೂಪಾಯಿ
5.        
ದುರ್ಗಾ ನಮಸ್ಕಾರ
3000 ರೂಪಾಯಿ
6.        
ಬೆಳ್ಳಿರಥ(ಸಂಜೆ )
3000 ರೂಪಾಯಿ
7.        
ಬೆಳ್ಳಿರಥ(ಮಧ್ಯಾಹ್ನ)
2500 ರೂಪಾಯಿ
8.        
ಶನಿ ಶಾಂತಿ
3000 ರೂಪಾಯಿ
9.        
ಏಕಾದಶ ರುದ್ರಾಭಿಷೇಕ
2000 ರೂಪಾಯಿ
10.    
ನಿತ್ಯಪೂಜೆಯ ಬಗ್ಗೆ ಡಿಪೋಸಿಟ
1000 ರೂಪಾಯಿ
11.    
ಸಂಪುಟೀಕರಣ ಚಂಡಿಕಾ ಪಾರಾಯಣ
800 ರೂಪಾಯಿ
12.    
ಪವಮಾನ ಕಲಶ(ನಾಗದೇವರಿಗೆ)
600 ರೂಪಾಯಿ
13.    
ಸರ್ವ ಸೇವೆ
500 ರೂಪಾಯಿ
14.    
ರಾಶಿ ಪೂಜೆ(ಮುಂಡತ್ತಾಯ ದೇವರಿಗೆ)
500 ರೂಪಾಯಿ
15.    
ಲಕ್ಷ್ಮೀ ಹೃದಯ ಪಾರಾಯಣ
500 ರೂಪಾಯಿ
16.    
ಚಂಡಿಕಾ ಪಾರಾಯಣ
500 ರೂಪಾಯಿ
17.    
ಚಿಕ್ಕರಂಗಪೂಜೆ
500 ರೂಪಾಯಿ
18.    
ಸತ್ಯನಾರಯಣ ಪೂಜೆ
350 ರೂಪಾಯಿ
19.    
ಪಂಚ ಪೂಜೆ
250 ರೂಪಾಯಿ
20.    
ಹೂವಿನಪೂಜೆ
200 ರೂಪಾಯಿ
21.    
ನಿತ್ಯ ಪೂಜೆ
200 ರೂಪಾಯಿ
22.    
ತುಲಾಭಾರ ಕಾಣಿಕೆ(ಬಾರದಾನ ಅಲಾಯದ)
100 ರೂಪಾಯಿ
23.    
ಪಂಚಾಮೃತ ಸೇವೆ
100 ರೂಪಾಯಿ
24.    
ಕಜ್ಜಾಯ ನೈವೇದ್ಯ
100 ರೂಪಾಯಿ
25.    
ವಡೆ ಪೂಜೆ (ವೀರಭದ್ರ ದೇವರಿಗೆ)
100 ರೂಪಾಯಿ
26.    
ನಂದಾದೀಪ 1 ದಿನಕ್ಕೆ
100 ರೂಪಾಯಿ
27.    
ರುದ್ರಾಭಿಷೇಕ
100 ರೂಪಾಯಿ
28.    
ಕ್ಷಿರಾಭಿಷೇಕ
100 ರೂಪಾಯಿ
29.    
ಹರಿವಾಣ ನೈವೇದ್ಯ
75 ರೂಪಾಯಿ
30.    
ತ್ರಿಮಧುರ ನೈವೇದ್ಯ
75 ರೂಪಾಯಿ
31.    
ಲಲಿತ ಸಹಸ್ರನಾಮ
50 ರೂಪಾಯಿ
32.    
ದುರ್ಗಾ ಸಹಸ್ರನಾಮ
50 ರೂಪಾಯಿ
33.    
ಹಾಲು ಪರಮಾನ್ನ
50 ರೂಪಾಯಿ
34.    
ಅಷ್ಟೋತ್ತರ
30 ರೂಪಾಯಿ
35.    
ಕರ್ಪೂರ ಮಂಗಳಾರತಿ
30 ರೂಪಾಯಿ
36.    
ಭಸ್ಮಾರ್ಚನೆ(ವೀರಭದ್ರ ದೇವರಿಗೆ)
30 ರೂಪಾಯಿ


ಹೆಚ್ಚಿನ ಮಾಹಿತಿಗಾಗಿ ದೇವಳದ ಕಛೇರಿಯನ್ನು ಸಂಪರ್ಕಿಸಿ: 08259-277221,9591560809.