ಸ್ಥಳ ಪುರಾಣ
ಲೇಖಕರ ಲೇಖಕನಿಯಿಂದ,

ಪ್ರಾಕೃತಿಕವಾಗಿ ವಿಶಿಷ್ಟ ಸ್ಥಾನವನ್ನು ಪಡೆದ ತಾಯಿಯು ಪ್ರಕೃತಿ ಪ್ರಿಯಳಾಗಿ ಇಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಿಂದ ಉದ್ಭವಿಸಿ ಲಿಂಗ ರೂಪಿಣಿಯಾಗಿ ನೆಲೆ ನಿಂತಿದ್ದಾಳೆ. ಹುಟ್ಟಿದ್ದು ನೀರಿನಲ್ಲಿ, ರೂಪ ಕಲ್ಲು, ಆಭರಣವೇ ಮಣ್ಣು. ಇದರಿಂದ ಆ ತಾಯಿಯ ಅದ್ಭುತ ಶಕ್ತಿ ಏನೆಂಬುದರ ಅರಿವಾಗುತ್ತದೆ. ’ಬ್ರಾಹ್ಮೀ’ ಶಕ್ತಿಯ ಸಂಕೇತ, ಭಕ್ತಿಯ ಉಗಮ. ಪರಮೇಶ್ವರನ ಮಡದಿ ಆದಿ ಪರಮೇಶ್ವರಿಯಾಗಿ, ಜಗತ್ತಿಗೆ ಬಂದ ಕಷ್ಟಗಳ ಪರಿಹರಿಸುವ ದುರ್ಗೆಯಾಗಿ, ಬ್ರಹ್ಮಾಣೀ ಶಕ್ತಿಯ ಐಕ್ಯವಾದ್ದರಿಂದ ನೆಲೆನಿಂತ ಬ್ರಾಹ್ಮೀ ದುರ್ಗಾಪರಮೇಶ್ವರಿಯ ಸನ್ನಿದಿ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರ ಇದಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತ್ಯಾತ್ಮಕ, ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಸ್ವರೂಪಿಣಿಯಾಗಿ ತ್ರಿಶಕ್ತ್ಯಾತ್ಮಕವಾದ ಅದ್ಭುತ ಶಕ್ತಿ ಕಮಲಶಿಲೆಯಲ್ಲಡಗಿದೆ. ಪೂಜನೀಯ ದಿವಂಗತ ಕಮಲಶಿಲೆ ಸೀತಾರಾಮ ಭಟ್ಟರು 1976ರಲ್ಲಿ ರಚಿಸಿದ “ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮೈ”ಹೂತ್ತಗೆಯ ಆಧಾರದಲ್ಲಿ ಈ ಕೃತಿಯನ್ನು ರಚಿಸಲಾಗಿದೆ.
“ಕಮಲಶಿಲೆ ಸ್ಥಳ ಪುರಾಣ” ಹೊತ್ತಗೆಯ ಸಂಪೂರ್ಣ ಲೇಖನವನ್ನು ಒಂದೊಂದಾಗಿ ಈ ಮುಂದೆ ಪ್ರಕಟಿಸಲಾಗುವುದು...
No comments:
Post a Comment