ಸ್ಥಳ ಪುರಾಣ
ಕುಬ್ಜಾ ನದಿ
ಭಾಗ 1:
ಹಿಂದೆ
ಕೈಲಾಸ ಪರ್ವತದ ಶಿಖರದಲ್ಲಿ ಸಿದ್ಧ ಗಂಧರ್ವರಿಂದ ಸೇವಿಸಲ್ಪಡುವ ವಜ್ರ ವೈಡ್ಯೂರ್ಯಗಳಿಂದ ಕೂಡಿದ
ಶಿವ ಭಕ್ತ ಸಮೂಹದಿಂದ ಆರಾಧಿಸಲ್ಪಡುವ ಮಹೇಶ್ವರನು
ಸತಿ ಪಾರ್ವತಿಯೊಂದಿಗೆ ನವರತ್ನ ಖಚಿತ ಪೀಠದಲ್ಲಿ ಆಸೀನನಾಗಿದ್ದನು.ಇಲ್ಲಿ ಪ್ರತಿ ನಿತ್ಯ ಸಂಧ್ಯಾ
ಕಾಲದಲ್ಲಿ ಪದ್ದತಿಯಂತೆ ನಾಟ್ಯ ಕೋವಿದೆಯಾದ ಪಿಂಗಲಾ ಎಂಬ ವೇಶ್ಯೆಯಿಂದ ನರ್ತನ ಸೇವೆ
ನಡೆಯುತ್ತಿತ್ತು. ಇದರಿಂದ ಶಿವ ಪಾರ್ವತಿಯರು ಸಂತೋಷ ಪಡುತ್ತಿದ್ದರು. ಒಂದು ದಿನ ಪಿಂಗಲೆಯು ತನ್ನ
ದೇಹ ಸೌಂದರ್ಯದ ಗರ್ವಿತಳಾಗಿ ರೂಪ ಮದದಿಂದ ನಾಟ್ಯವನ್ನು ಮಾಡುವುದಿಲ್ಲ. ಆಗ ಕ್ರೋಧಗೊಂಡ
ಪಾರ್ವತಿಯು ಪಿಂಗಲೆಗೆ ‘ಸರ್ವ ಲೋಕವೇ ಅಸಹ್ಯ ಪಡುವಂತಹ ಅಂಕುಡೊಂಕಿನ ಗೂನು ಬೆನ್ನಿನ
ಕುಬ್ಜೆಯಾಗು. ರೂಪ ಮದದಿಂದ ಗರ್ವಿತಳಾದ ನಿನಗೆ ಇದೇ ಶಾಪ ‘ ಎಂದು ಶಪಿಸುತ್ತಾಳೆ. ಶಾಪಗ್ರಸ್ತಳಾದ
ಪಿಂಗಲೆಯು ತಕ್ಷಣವೇ ಸುಂದರವಾದ ದೇಹದಿಂದ ಬಿಡಲ್ಪಟ್ಟು ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ
ಅರಿವಾಗಿ ದೇವಿಯನ್ನು ಪರಿಪರಿಯಾಗಿ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಕುಬ್ಜೆಯ ಮೂರೆಗೆ
ಪ್ರಸನ್ನಳಾದ ಪಾರ್ವತಿಯೂ ಈ ರೀತಿ ಅಭಯವನ್ನು
ನೀಡುತ್ತಾಳೆ.
“ನಾನು ಭೂಲೋಕದಲ್ಲಿ ಕಂಟಕರಾಗಿರುವ ಖರರಟ್ಟ ಅಸುರರ ಸಂಹಾರಕ್ಕಾಗಿ ಹೋಗುತ್ತೇನೆ.
ಅಲ್ಲಿ ಸಹ್ಯಾದ್ರಿ ಪರ್ವತದ ಬಳಿ ಇರುವ ಮನೋಹರ ರೈಕ್ವ ಮಹಾಮುನಿಗಳ ಆಶ್ರಮದ ಮುಂಭಾಗದಲ್ಲಿ ಬರುವ
ಶ್ರಾವಣ ಮಾಸದ ಕೃಷ್ಣ ನವಮಿಯ ಶುಕ್ರವಾರದಂದು ಪಾತಾಳದಿಂದ ಲಿಂಗರೂಪಿಣಿಯಾಗಿ ಅವತರಿಸುತ್ತೇನೆ.
ಸದಾ ಶಿವನ ಆಜ್ಞೆಯಂತೆ ಆ ಪುಣ್ಯ ಮತ್ತು ಪವಿತ್ರವಾದ ಸ್ಥಳದಲ್ಲಿ “ಕಮಲಶಿಲಾ” ರೂಪದ
ಲಿಂಗೆಯಾಗಿ ಆವಿರ್ಭವಿಸಿ, ಭಕ್ತರ ಭಕ್ತಿಗೆ ಮೆಚ್ಚಿ ಭಕ್ತಾಭೀಷ್ಟ ಪ್ರದಾಯಿನಿಯಾಗುತ್ತೇನೆ.
ಮುಂದೆ ಆ ಕ್ಷೇತ್ರವು ಕಮಲಶಿಲೆಯೆಂದು ಖ್ಯಾತಿಯಾಗುತ್ತದೆ. ನೀನು ಭೂಲೋಕಕ್ಕೆ ಹೋಗಿ ರೈಕ್ವಾಶ್ರಮದ
ಬಳಿ ಇರುವ ಸುಪಾರ್ಶ್ವ ಗುಹೆಯಿಂದ ಹೊರಡುವ ನಾಗತೀರ್ಥದ ಸಮೀಪ ಆಶ್ರಮ ರಚಿಸಿಕೊಂಡು ನನ್ನ
ಅನುಗ್ರಹಕ್ಕಾಗಿ ತಪಸ್ಸನ್ನು ಮಾಡು.ನಿನ್ನ ತಪಸ್ಸಿಗೆ ಮೆಚ್ಚಿ ಮುಂದೆ ಶಾಪಕ್ಕೆ ಮೋಕ್ಷವನ್ನು
ಕರುಣಿಸುತ್ತೆನೆ.” ಎಂಬುದಾಗಿ ಅಪ್ಪಣೆ ಕೊಡಿಸುತ್ತಾಳೆ.
ಪಾರ್ವತಿಯ ಆಜ್ಞೆಯಂತೆ ಭೂಲೋಕಕ್ಕೆ
ಬಂದು ಪಿಂಗಲೆಯ ರೈಕ್ವಾಶ್ರಮದ ಬಳಿ ಇರುವ ನಾಗತೀರ್ಥದ ಸಮೀಪ ಆಶ್ರಮ ರಚಿಸಿಕೊಂಡು ಅಂಬಿಕೆಯ
ದರ್ಶನವನ್ನು ಅಪೇಕ್ಷಿಸುತ್ತಾ ಮಹತ್ತಾದ ತಪಸ್ಸನ್ನು ಮಾಡಿದಳು. ರೈಕ್ವ ಮಹಾಮುನಿಗಳು ಮಹಾದಿವ್ಯ
ಜ್ಞಾನಿಯಾದ ಮಹರ್ಷಿಗಳಾಗಿರುತ್ತಾರೆ. ಇವರು ಇಲ್ಲಿ ಕಣವಾದ ತಪಸ್ಸನ್ನು ಮಾಡಿ ಸಿದ್ಧಿ ಪಡೆದು
ಮೋಕ್ಷ ಹೊಂದಿದ ಮುನಿ ಪುಂಗವರಾಗಿರುತ್ತಾರೆ. ಇವರ
ತಪೋ ಬಲದಿಂದ ಕಮಲಶಿಲೆಯೂ ಇಂದು ಪುಣ್ಯಭೂಮಿಯಾಗಿದೆ ರೈಕ್ವ ಮಹರ್ಷಿಗಳ ಅಭೀಷ್ಟದಂತೆ ಕುಬ್ಜೆಯ ತಪಸ್ಸಿಗೆ ಸಂತುಷ್ಟಳಾಗಿ ಹಿಂದೆ ಹೇಳಿದಂತೆ
ಪಾತಾಳದಿಂದ ಲಿಂಗರೂಪಿಯಾಗಿ ಪ್ರತ್ಯಕ್ಷಳಾದ ಪಾರ್ವತಿಯು ಶಾಪಕ್ಕೆ ವಿಮೋಚನಾ ದಾರಿಯನ್ನು
ಸೂಚಿಸುತ್ತಾಳೆ. (ಸಶೇಷ)
No comments:
Post a Comment