Sunday, May 25, 2014

ಸ್ಥಳ ಪುರಾಣ

                 ನಾಗರಾಜ (ಆದಿಶೇಷ)ನಿಗೆ  ಅಭಯ:
    
              ಹಿಂದೆ  ಗರುಡನ ಭೀತಿಗೊಳಗಾದ ಆದಿಶೇಷನು ಶ್ರೀ ಕಮಲಶಿಲೆಗೆ ಬಂದು ಸುಪಾರ್ಶ್ವ  ಗುಹೆಯಲ್ಲಿ ಶ್ರೀ ಬ್ರಾಹ್ಮೀ ದೇವಿಯನ್ನು ಕುರಿತು ಶ್ರದ್ಧೆಯಿಂದ ತಪಸ್ಸನ್ನು ಮಾಡುತ್ತಾನೆ. ನಾಲ್ಕು ಶ್ಲೋಕಗಳನ್ನು ರಚಿಸಿ ತಾಯಿಯನ್ನು ಪರಿಪರಿಯಾಗಿ ಸ್ತುತಿಸಿ ದೇವಿಯನ್ನು   ಪ್ರಸಂನಗೋಳಿಸುತ್ತಾನೆ. ಆಗ ನಾಗರಾಜನು ‘ಬ್ರಾಹ್ಮೀ ದೇವಿಯೇ , ನಮ್ಮ ತಾಯೀ ಕದ್ರುವು ಕೋಪದಿಂದ ಗರುಡನಿಗೆ ಆಹಾರವಾಗುವಂತೆ ಶಾಪ ಕೊಟ್ಟಿರುತ್ತಾಳೆ. ನಿನಗೆ ಶರಣು ಬಂದಿರುತ್ತೇನೆ. ನಮಗೆ ಪ್ರಾಣದಾನ  ಮಾಡಿ ಉದ್ದರಿಸಬೇಕು’. ಎಂದು ಬೇಡಿಕೊಳ್ಳುತ್ತಾನೆ. ಆಗ ದೇವಿಯು ‘ಅನಂತನೇ  ತಾಯಿಯ ಶಾಪ ಅಭಯವಾಗಿದ್ದು ಅದನ್ನು ಮೀರಲು  ಸಾಧ್ಯವಿಲ್ಲ. ಗರುಡನಿಂದ ಅಪಾಯ ಬಾರದಂತೆ ಒಂದು ಉಪಾಯವನ್ನು ಸೂಚಿಸುತ್ತಾಳೆ. ನೀನು ವಿಷ್ಣುವಿಗೆ ಹಾಸಿಗೆಯಾಗು ಉಳಿದ ಸರ್ಪಗಳು ನನ್ನ ಆಶ್ರಯದಲ್ಲಿ  ಮತ್ತು ಸುಪಾರ್ಶ್ವ ಗುಹೆಯಲ್ಲಿರಲಿ . ಗರುಡನಿಂದ ಆಪತ್ತು
ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ. ನೀನು ತಪಸ್ಸು ಮಾಡಿದ ಆ ಗುಹೆಯ ಸಾನಿದ್ಯದಿಂದ  ಹೊರಡುವ  ಜಲಮಾಣಿಕ್ಯವು  ನಾಗತಿರ್ಥವೆಂದು ಪ್ರಸಿದ್ಧಿ ಹೊಂದುತ್ತದೆ. ಈ ತೀರ್ಥ ದಲ್ಲಿ ಸ್ನಾನ ಮಾಡಿದವರಿಗೆ ಸರ್ಪ ಬಾಧೆ ಇರುವುದಿಲ್ಲ,’ ಎಂದು ವರಪ್ರದಾನ ಮಾಡಿ ಅಭಯವನ್ನಿತ್ತು ಮಾಯವಾಗುತ್ತಾಳೆ.
                      ಸುಪಾರ್ಶ್ವ ಗುಹೆಯಲ್ಲಿ ನಾಗಸಾನಿಧ್ಯವಿದ್ದು ಅಲ್ಲಿಂದ ನಾಗತಿರ್ಥವು ಅಂತರ್ಗಾಮಿಯಾಗಿ ಹರಿದುಬಂದು ಕುಬ್ಜೆಯನ್ನು ರೈಕ್ವಶ್ರಮದ ಮುಂಭಾಗದಲ್ಲಿ ಸಂಗಮಿಸುತ್ತದೆ. ಇಲ್ಲಿಯೇ  ಶ್ರೀ ಬ್ರಾಹ್ಮೀ ದುರ್ಗಾಪರಮೆಶ್ವರಿಯು ಲಿಂಗರೂಪಿಣಿಯಾಗಿ ಪಾತಾಳದಿಂದ ಆವಿರ್ಭವಿಸುತ್ತಾಳೆ. ದೇವಿಯ ಬಲಭಾಗದಲ್ಲಿ ಬೃಹದಾಕಾರದ ಹುತ್ತವೂ, ನಾಗದೇವಸ್ಥಾನವೂ ಇರುತ್ತದೆ.

      

No comments:

Post a Comment