Saturday, April 12, 2014

ಸ್ಥಳ ಪುರಾಣ

ವಿಶೇಷ ಉತ್ಸವ-“ಶ್ರೀ ಮನ್ಮಹಾರಥೋತ್ಸವ

          ಚೈತ್ರ ಶುದ್ಧ ಪಾಡ್ಯದಂದು ಚಾಂದ್ರಮಾನ ಯುಗಾದಿ ಹಬ್ಬ,ಪಂಚಾಂಗ ಶ್ರವಣ, ಪೂರ್ಣಫಲ ಸಮರ್ಪಣೆ ನಡೆಯುತ್ತಿದೆ. ಚೈತ್ರ ಶುದ್ಧ ದಶಮಿಯಂದು ನಿರೂಪ ಆರಂಭ. ಅಂದರೆ ಮಹಾ ರಥೋತ್ಸವದ ಆಮಂತ್ರಣ ಪತ್ರಿಕೆ ಬರೆದು ದೇವರಿಗೆ ಸಮರ್ಪಣೆ, ವಿಶೇಷ ಉತ್ಸವ ಆರಂಭ.


          ಚೈತ್ರ ಬಹುಳ ಮೂಲಾ ನಕ್ಷತ್ರಕ್ಕೆ ಮೂರು ದಿನ ಮೊದಲು ದ್ವಜಾರೋಹಣದೊಂದಿಗೆ ವಾರ್ಷಿಕ ಜಾತ್ರೆ ಆರಂಭಿಸಿ ‘ಶಿಬಿಕಾಂ ಪುಷ್ಪ ದೋಲಾಂಚ ಸಿಂಹವಾಹನ ಮೇವಚ’ ಎಂಬಂತೆ ಗೌನೋತ್ಸವದಂತೆ ಶಿಬಿಕಾಯನೋತ್ಸವ, ಪುಷ್ಪಕ ವಾಹನೋತ್ಸವ, ಸಿಂಹವಾಹನೋತ್ಸವಗಳೆಂಬ ಮೂರು ದಿನ ಅಖಂಡ ಉತ್ಸವಗಳು ಕಟ್ಟೆವಸಂತಗಳು ನಡೆಯುತ್ತವೆ. ನಾಲ್ಕನೇ ದಿನ ಮೂಲಾ ನಕ್ಷತ್ರದಂದು           ಶ್ರೀಮನ್ಮಹಾರಥೋತ್ಸವ , ಐದನೇ ದಿನ ಚೂರ್ಣು ಉತ್ಸವ ಮತ್ತು ಆರನೇ ದಿನ ಅವಭ್ರತ, ಪೂರ್ಣಕುಂಭಾಭಿಷೇಕ ಉತ್ಸವಗಳು ಜರಗುತ್ತದೆ.



No comments:

Post a Comment